Sunday, February 7, 2010


ಮನಸು ಬೆವರುತ್ತಿದೆ


ಮಳೆ ಸುರಿದರೆ ಅವಳ ನೆನಪು ಕಾಡುತ್ತಿತ್ತು

ವಸಂತ ಎದೆಯೊಳಗೆ ಕಾಲ್ಗೆಜ್ಜೆಯ ಗಲ ಗಲಿಸುತ್ತಿದ್ದ.


ಈಗ ಮಳೆಯಾದರೆ ಮನಸು ಬೆವರುತ್ತಿದೆ

ಬದುಕು ತೇಲಿ ಹೋದವರ ನೋವಿನಲಿ

ಅವಳ ವಿಳಾಸ ಕಳೆದು ಹೋಗಿದೆ

ವಸಂತನ ಕಾಲ್ಗೆಜ್ಜೆ ಉದುರಿ ಹೋಗಿದೆ.


-ಟಿ.ಎಸ್. ಗೊರವರ

No comments:

Post a Comment